News & Events
Latest updates, announcements, and activities from BIISM



ಸುರಕ್ಷತೆ ಎಲ್ಲರ ಆದ್ಯತೆ
ಬಿ.ಐ.ಐ.ಎಸ್.ಎಂ ಪ್ರಾಯೋಜಕತ್ವದಲ್ಲಿ ವಿಚಾರ ಸಂಕಿರಣ
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಭಾರತ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಸೇಫ್ಟಿ ಮ್ಯಾನೆಜ್ಮೆಂಟ್ (ಬಿ.ಐ.ಐ.ಎಸ್.ಎಂ) ಸಂಸ್ಥೆಯ ಪ್ರಾಯೋಜಕತ್ವದಲ್ಲಿ, ಕೆ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಲವು ಕಂಪನಿಯ ಕಾರ್ಮಿಕರಿಗೆ, ಸಂಶೋಧಕರಿಗೆ ಉಪನ್ಯಾಸಕರಿಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಬಿ.ಐ.ಐ.ಎಸ್.ಎಂ ಸಂಸ್ಥೆಯ ಅಧ್ಯಕ್ಷರಾದ ಉಚಿತ್ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾದ ರಜತ್ ಕುಮಾರ್, ಪ್ರಾಂಶುಪಾಲರಾದ ಪ್ರೊ.ಮುರುಳೀಧರ್ ಕೆ ಎಸ್ ಮತ್ತು ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಸಂಸ್ಥೆಯ ನಿರ್ದೇಶಕರುಗಳಾದ ಡಾ.ಶ್ರೀನಿವಾಸ್, ನಾರಾಯಣಸ್ವಾಮಿ ಮತ್ತು ಬಿ.ಬಿ.ಎಸ್ ನ ನುರಿತ ಉಪನ್ಯಾಸಕ ಹೆಚ್.ಎಲ್ ಕೈಲಾ ಹಾಗೂ ಕೆ ಎಸ್ ಐ ಟಿ ಯ ಅಧ್ಯಕ್ಷರಾದ ಆರ್ ರಾಜಗೋಪಾಲ್ ನಾಯ್ಡು ಮತ್ತು ಉಳಿದ ಪದಾಧಿಕಾರಿಗಳ ಜೊತೆಗೆ ಆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಡಿ.ಆರ್ ಸ್ವಾಮಿ, ಪ್ರಾಂಶುಪಾಲರಾದ ಡಾ.ದೀಲಿಪ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಸುರಕ್ಷತಾ ಸಂಸ್ಕೃತಿಯನ್ನು ಪರಿವರ್ತಿಸುವುದು ಮತ್ತು ಪರಿಣಾಮಕಾರಿ ನಡವಳಿಕೆ ಆಧಾರಿತ ಸುರಕ್ಷತಾ ತಂತ್ರಗಳು ಹೇಗೆ ಪಾಲಿಸಬೇಕೆಂದು ತಿಳಿಸಿಕೊಡಲಾಯಿತು.
ಈ ನಿಟ್ಟಿನಲ್ಲಿ ಬಿ.ಐ.ಐ.ಎಸ್.ಎಂ ಸಂಸ್ಥೆಯು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಭೇತಿ ಜೊತೆಗೆ ಸ್ನಾತಕೋತ್ತರ ಡಿಪ್ಲೊಮಾವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೂಲಕ ಕೊಡಲು ಸಜ್ಜಾಗಿದೆ.
Starting June 7, 2025
Free Training Sessions for Students
We are pleased to inform you that starting from 7th June 2025, we will be conducting free training sessions every Saturday at our institute from 10:30 AM to 1:00 PM.
The sessions will include:
- Career Guidance
- Industrial Safety Management
- Industry Ergonomics
- EHS (Environment, Health & Safety) Management
- Behavior-Based Safety (BBS)
- Job Opportunities & Industry Insights
These sessions are open to all branches of Engineering, Degree, and Diploma students, especially for pre-final year, final year, and passed-out students. Training will be delivered by industry experts, and participation certificates will be provided to attendees.
Limited Seats Available
Early registration is preferable due to limited seats. We request you to kindly inform your students and encourage them to attend.